1. Have an Interesting Snippet to Share : Click Here
    Dismiss Notice

Poem in Kannada

Discussion in 'Poetry' started by regi_sr, Oct 26, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello regi...

    Hegidhira?

    E kavithe nanna frnd baredirodhu alla... G S Shivarudrappa avardhu...

    estu dina huduktha idhe lyrics goskara..sikthu so illi hakidhe.

    Idhu thumbha ishta nange...thumbha meaningful so

    Mathhe nimge yava kavithe ishta?
     
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello Kalyaniyavare....

    Suma here :)

    Houdhu e G S shivarudrappa avara kavithe mostly 8th illa 9th std academic ali ithhu... IDhu olleya Bhava geethe nu houdhu...nanage thumbha andhre thumbha manasige hathhira agiruva geethe :)

    MAthhu namma naada geethe jai bharatha janiniya tanujathhe kuda...lyrics ivathhu hakthini

    Nanna kavithegala list inna thumbha idhe haktha irthini yella inmele

    Mathhe sigona...

    Nimma fav. yavdhu...
     
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ
    ಜಯ ಸುಂದರ ನದಿವನಗಳ ನಾಡೇ ಜಯ ಹೇ ರಸ ಋಷಿಗಳ ಬೀಡೆ.
    ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದದ ಹೊನ್ನಿನ ಗಣಿಯೆ
    ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

    ಜನನಿಯ ಜೋಗುಳ ವೇದದ ಘೋಶ,ಜನನಿಗೆ ಜೀವವು ನಿನ್ನಾವೇಶ,
    ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
    ಕಪಿಲ ಪತಂಜಲ ಗೌತಮ ಜಿನನುತ,ಭಾರತ ಜನನಿಯ ತನುಜಾತೆ !

    ಶಂಕರ ರಾಮಾನುಜ ವಿದ್ಯಾರಣ್ಯ,ಬಸವೇಶ್ವರರಿಹ ದಿವ್ಯಾರಣ್ಯ
    ರನ್ನ ಶಡಕ್ಷರಿ ಪೊನ್ನ,ಪಂಪ ಲಕುಮಿಪತಿ ಜನ್ನ
    ಕಬ್ಬಿಗರುದಿಸಿದ ಮಂಗಳ ಧಾಮ,ಕವಿ ಕೋಗಿಲೆಗಳ ಪುಣ್ಯಾರಾಮ
    ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !

    ತೈಲಪ ಹೊಯ್ಸಳರಾಳಿದ ನಾಡೇ,ಡಂಕಣ ಜಕಣರ ನಚ್ಚಿನ ಬೀಡೆ
    ಕೃಷ್ಣ ಶರಾವತಿ ತುಂಗ,ಕಾವೇರಿಯ ವರ ರಂಗ
    ಚೈತನ್ಯ ಪರಮಹಂಸ ವಿವೇಕರ,ಭಾರತ ಜನನಿಯ ತನುಜಾತೆ !

    ಸರ್ವ ಜನಾಂಗದ ಶಾಂತಿಯ ತೋಟ,ರಸಿಕರ ಕಂಗಳ ಸೆಳೆಯುವ ನೋಟ
    ಹಿಂದೂ ಕ್ರೈಸ್ತ ಮುಸಲ್ಮಾನ,ಪಾರಸಿಕ ಜೈನರುದ್ಯಾನ
    ಜನಕನ ಹೋಲುವ ದೊರೆಗಳ ಧಾಮ,ಗಾಯಕ ವೈಣಿಕರಾರಾಮ
    ಕನ್ನದ ನುಡಿ ಕುಣಿದಾಡುವ ದೇಹ,ಕನ್ನದ ತಾಯಿಯ ಮಕ್ಕಳ ಗೇಹ
    ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ


    Kuvempu avara e geethe yellarigu gothhu yellarigu ishta...

    Idhu namma Naada geethe andhre State anthem :)
     
  4. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Kuvempu avara e kavithe yella shaale vidyalayagalali baredhiruthare...adhu kuda entrance nalli... estu inspiring words alva kaliyalu hogovarige!!

    ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ
    ಶಿಲೆಯಲ್ಲ ವೀ ಗುಡಿಯು ಕಲೆಯ ಬಲೆಯು
    ಕಂಬನಿಯ ಮಾಲೆಯನು ಎದೆಯ ಬಟ್ಟಲೋಳಿಟ್ಟು
    ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ

    ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲ
    ಕರ್ಪೂರದಾರತಿಯ ಜ್ಯೋತಿಯಿಲ್ಲ
    ಭಗವಂತ ತಾನೆಂಬ ರೂಪುಗೊಂದಿಹುದಿಲ್ಲಿ
    ರಸಿಕತೆಯ ಕದಲಕ್ಕಿ ಹರಿಯುದಿಲ್ಲಿ
     
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Idhu mathhondhu Kuvempuravara adhbutha rachane (check Attchment ) antha helidhru kooda thappagola ankolthini...idhu yellara bayallu sada rarajisuva apoorva kavithe...
     

    Attached Files:

  6. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    D S Karki yavara e rachane...naavella kanishta Nov 1st anthu nenpu madikonde theerthivi...nanna vayaktiga collections nalli e kavithe mathhu adara raaga samyojane modala sthanadali yavagalu kooda... idhanna replace mado thara inna yava kavithe kuda/geethe inna moodi bandhila.

    (Check attachment)
     

    Attached Files:

    Last edited: Dec 16, 2008
  7. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Movie Name: Belli Moda
    Singer: Janaki S
    Music Director: Vijayabhaskar
    Lyrics: Bendre D R



    mooDala maneya muttina neerina
    erakava hoyda, nuNNane erakava hoyda


    baagila theredu beLaku haridu
    jagavella thoyda, daevanu jagavella thoyda


    elegaLa mele, hoogaLa oLage
    amrithada bindu, kanDavu amrithada bindu


    yaaririsiharu mugilina maelinda
    illige ida thandu, eega illige ida thandu


    giDaganTegaLa koraLoLaginda hakkigaLa haaDu
    horaTithu, hakkigaLa haaDu


    ganDharvara seemeyaayithu, kaaDina naaDu
    kshNadoLu, kaaDina naaDu

    *************************************************
    E haadanna nanu yavaglu kalpanaavaru helo haage imagine madikolodhu...nange adhe thaleli kuthidhe ..naanu black & white movies yella appa jothe kuthkondu nodtha irtha idhe :)

    Namge e padhya high school ali academic ali idhaga anthu nange hele theerada khushi ananda.. a padhya mostly nanu odhale illa...thalele ithhu e haadu :)
    Even namma final exam ali kuda idhe kelidhru anisuthe :)

    Da. Ra. Bendhre yavara kavithe ...Janaki yavara gayana..Vijay Bhaskar ravara music anthu e haadige mathhastu shoobhe thanidhe...

    Idhagintha innu hechhagi namma prakruthina hogaLalu sadhyna heli ?:)

     

    Attached Files:

  8. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Kuvempuravara mathhondu rachane:

    ಓ ನನ್ನ ಚೇತನ ಆಗು ನೀ ಅನಿಕೇತನ
    ರೂಪ ರೂಪಗಳನು ದಾಟಿ ನಾಮ ಕೂತಿಗಳನು ಮೀಟಿ

    ಎದೆಯ ಬಿರಿಯ ಭಾವದೀಟಿ |

    ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು
    ಕೊನೆಯನೆಂದು ಮುಟ್ಟದಿರು ಓ ಅನಂತವಾಗಿರು |

    ಅನಂತ ತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ
    ಅನಂತ ನೀ ಅನಂತವಾಗು ಆಗು ಆಗು ಆಗು ಆಗು |

     
  9. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಕುವೆಂಪು ರವರಿಗೆ ಕನ್ನಡ ಭಾಷೆಯ ಬಗ್ಗೆ ಇದ್ದ ಅಭಿಮಾನ ಮಾತಿನಲ್ಲಿ ಹೇಳತೀರದು

    ಕನ್ನಡ ಎನೆ ಕುಣಿದಾಡುವುದೆನ್ನೆದೆ
    ಕನ್ನಡ ಎನೆ ಕಿವಿನಿಮಿರುವುದು |


    ಕಾಮನಬಿಲ್ಲನು ಕಾಣುವ ಕವಿಯೊಲು
    ತೆಕ್ಕನೆ ಮನ ಮೈ ಮರೆಯುವುದು |

    ಕನ್ನಡ ಕನ್ನಡ ಹಾ ಸವಿಗನ್ನಡ
    ಬಾಳುವುದೇತಕೆ ನುಡಿ ಎಲೆ ಜೀವ |

    ಸಿರಿಗನ್ನಡದಲಿ ಕವಿತೆಯ ಹಾಡೆ
    ಸಿರಿಗನ್ನದದೆಳಿಗೆಯನು ನೋಡೆ
    ಕನ್ನಡ ತಾಯಿಯ ಸೇವೆಯ ಮಾಡೆ |
     
  10. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಯುಗಯುಗಾದಿ ಕಳೆದರೂ ಯುಗಾದಿ ಮರುಳಿ ಬರುತಿದೆ
    ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ|


    ಹೊಂಗೆ ಹೂವ ತೊಂಗಳಲ್ಲಿ ಭೃಂಗದ ಸಂಗೀತ ಕೇಳಿ
    ಮತ್ತೆ ಕೇಳಿ ಬರುತಿದೆ |
    ಬೇವಿನ ಕಹಿ ಬಾಳಿನಲಿ ಹೂವಿನ ನಸುಗಂಪು ಸೂಸಿ
    ಜೀವ ಕಲೆಯ ತರುತಿದೆ |


    ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು
    ಅಖಿಲ ಜೀವ ಜಾತಿಗೆ
    ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ ಒಂದೇ ಹರಯ
    ನಮಗದಷ್ಟೆ ಯೇತಕೋ


    ನಿದ್ದೆ ಗೊಮ್ಮೆ ನಿತ್ಯ ಮರಣ ಯೆದ್ದ ಸಾಲ ನವೀನ ಜನನ
    ನಮಗೆ ಯೇಕೆ ಬಾರದೂ
    ಎಲೆ ಸನತ್ಕುಮಾರದೇವ ಎಲೆ ಸಾಹಸಿ ಚಿರಂಜೀವಿ
    ನಿನಗೆ ಲೀಲೆ ಸೇರದೋ


    ಯುಗಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ
    ಹೊಸವರುಷಕೆ ಹೊಸಹರುಷವ ಹೊಸತು ಹೊಸತು ತರುತಿದೆ

    ******************************************

    E kavite bagge nanu en helali... neeve helbeku :)

    Da. Ra. Bendre yavara kavite yellara bayallu chira amara :thumbsup
     

Share This Page