1. Want to be a Positive Parent? : Click Here
    Dismiss Notice

kannada rhymes

Discussion in 'Toddlers' started by swt.charu, May 29, 2008.

  1. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Hello Shubha... thanks so much...

    Muddu ge nanna special thanks.... :kiss
    Avanige heli nan alla baredidhhu adhanella anta :)

    A eradu rhymes nange gothila shubha...nan friends ge keli nodtini sikkare kandita post madtini.

    Nimge gottiro rhymes kooda post madta iri :)
     
  2. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Papu na Padagalu :
    ********************************
    ಸುಬ್ಬ ಸೀನ ಕಾಡಿನೊಳಗೆ ಬೊಬ್ಬೆ ಒಡೆದರು
    ಅಬ್ಬರಿಸಲು ಹುಲಿ ತಾವೇ ತಂಬಿ ಕೊಂಡರು
    Big Laugh


    ********************************

    ಅಕ್ಕನಿಗಿರಿಸಿದ ಸಕ್ಕರೆ ಹಾಲನು
    ನೆಕ್ಕುತ ಕುದಿಯಿತು ಬೆಕ್ಕು
    ಬಿಕ್ಕುತ ಬಿಕ್ಕುತ ಅಕ್ಕ ಎಂದಳು
    ಬೆಕ್ಕೇ ನಿನಗೆ ಬಲು ಸೊಕ್ಕು


    *********************************

    ಬೆಲ್ಲ ತಿಂದು ಪುಟ್ಟ ಮಲ್ಲ
    ಹಲ್ಲು ಕಳೆದು ಕೊಂಡನು
    ಕಲ್ಲು ಸಕ್ಕರೆಯ ಕಂಡು
    ಜೊಲ್ಲು ಸುರಿಸಿ ನಿಂದನು


    ********************************

    ಅಮ್ಮನ ಮಡಿಲಲ್ಲಿ ಕುಲಿತಿರೆ ತಮ್ಮಗೆ
    ಮೂಗಿನ ತುದಿಯಲಿ ಹೆಮ್ಮೆ
    ಗುಮ್ಮ ಬಂದಳು ಎಂದರೆ ಸಾಕು
    ಚೀರಿ ಬಿಡುವ ಒಮೊಮ್ಮೆ


    *****************************
     
  3. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ಕೈ ಕೈ ಎಲ್ಲ್ ಹೋಯ್ತು
    ****************
    ಕೈ ಕೈ ಎಲ್ಲ್ ಹೋಯ್ತು?
    ಕಸದ ಮೂಲೆಗೆ ಹೋಯ್ತು


    ಕಸ ಏನ್ ಕೊಟ್ಟಿತು ?
    ಕಸಿ ಗೊಬ್ರ ಕೊಟ್ಟಿತು

    ಕಸ ಏನ್ ಮಾಡ್ದೆ ?
    ತೋಟದ ಮರಕ್ಕೆ ಹಾಕ್ದೆ

    ಯಾವ ಮರಕ್ಕ್ ಹಾಕ್ದೆ ?
    ತೆಂಗು ಮರಕ್ಕ್ ಹಾಕ್ದೆ

    ತೆಂಗು ಏನ್ ಕೊಟ್ಟಿತು ?
    ತೆಂಗಿನ ಕಾಯ್ ಕೊಟ್ಟಿತು

    ಬಾಳೆ ಏನ್ ಕೊಟ್ಟಿತು ?
    ಬಾಳೆಹಣ್ಣು ಕೊಟ್ಟಿತು

    ಕಾಯಿ ಹಣ್ಣು ಏನ್ ಮಾಡ್ದೆ ?
    ದೇವರ್ಗೆ ನೈವೇದ್ಯ ಮಾಡ್ದೆ

    ನೈವೇದ್ಯನ ಎಲ್ಲ್ ಇಟ್ಟೆ?
    ತಟ್ಟೆ ಒಳಗ ಇಟ್ಟೆ

    ಅಮೇಲ್ ಏನ್ ಮಾಡ್ದೆ ?
    ಹೊಟ್ಟೆ ಒಳಗ ಬಿಟ್ಟೆ



     
  4. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female

    ಗಣೇಶ ಬಂದ
    ಕಾಯಿಕಡಬು ತಿಂದ
    ಚಿಕ್ಕ ಕೆರೇಲಿ ಬಿದ್ದ
    ದೊಡ್ಡ ಕೆರೇಲಿ ಎದ್ದ

    :)
     
  5. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    Thanks shubha.... idhu antu Gnapati habba abntu andhre ella makkalu heltare...nanu kooda tumba sala helidhini...eglu heltini :)
     
  6. sumasandeep

    sumasandeep Silver IL'ite

    Messages:
    1,586
    Likes Received:
    31
    Trophy Points:
    90
    Gender:
    Female
    ತೋಟಕೆ ಹೋಗೋ ತಿಮ್ಮ
    ತೋಳ ಬಂದಿತಮ್ಮ
    ಹಸು ಮೆಸೋ ತಿಮ್ಮ
    ಹಸು ಅದಿತಮ್ಮ



    ಒಲೆ ಹುರಿಸೋ ತಿಮ್ಮ
    ಹುರಿ ಸುಟ್ಟಿತಮ್ಮ
    ಪಾಠ ಬರೆಯೋ ತಿಮ್ಮ
    ಬಳಪ ವಿಲ್ಲವಮ್ಮ



    ಹೂವು ಬಿಡಿಸೋ ತಿಮ್ಮ
    ಹಾವು ಕಚ್ಚಿತಮ್ಮ
    ಕವಾಲಿ ತರೋ ತಿಮ್ಮ
    ಕಾಲು ನೋವ್ವು ಅಮ್ಮ



    ನೀರು ಸೇದೋ ತಿಮ್ಮ
    ಕೈ ನೋವ್ವುತಮ್ಮ
    ಊಟಕ್ಕೆ ಬಾರೋ ತಿಮ್ಮ
    ಓದಿ ಬಂದೆನಮ್ಮ
     
  7. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    ಬಿಸಿ ಬಿಸಿ ದೋಸೆಗೆ ತುಪ್ಪವು ಬೇಕು
    ಮೊಸರಂಬದೆಯು ರುಚಿ ಇರಬೇಕು
    ದಿನ ದಿನ ಶಾಲೆಗೆ ಬಿಡು ಇರಬೇಕು
    ಕುಣಿ ಕುಣಿದಾಡುವ ಆಟವು ಬೇಕು
    ಹೊಸ ಗಡಿಯಾರವು ಕೈಗಿರಬೇಕು
    ಹರಳಿನ ಉಂಗುರ ಬೆರಳಿಗೆ ಬೇಕು
    ಸಭಿಕರು ನನ್ನನು ನೋಡಲೆ ಬೇಕು



    Hi Suma... ee haadu nammamma helidru.... thanks to my mom.... :)
     
  8. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    ರಾಮನ ಭಂಟ ಹನುಮಂತ
    ತಿರುಪತಿ ಎಂಬುದು ವೈಕುಂಠ
    ಅಯೋಧ್ಯವಾಸಿ ರಾಮ ನಮೋ
    ಗೋಕುಲವಾಸಿ ಕೃಷ್ಣ ನಮೋ

    :)
     
    Last edited: Jan 10, 2009
  9. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    ಟೋಪಿ ಬೇಕಾ ಟೋಪಿ
    ಎಂತಹ ಟೋಪಿ
    ಚಿನ್ನದ ಟೋಪಿ
    ಎಷ್ಟು ರೂಪಾಯಿ
    ಸಾವಿರ ರೂಪಾಯಿ
    ಬೇಡ ಬೇಡ
    ಒಂದು ರೂಪಾಯಿ
    ನಂಗೆ ಬೇಕೀಗಾ

    :)
     
  10. ShubhaHM

    ShubhaHM Bronze IL'ite

    Messages:
    571
    Likes Received:
    3
    Trophy Points:
    33
    Gender:
    Female
    ಬಣ್ಣದ ತಗಡಿನ ತುತ್ತೂರಿ
    ಕಾಸಿಗೆ ಕೊಂಡನು ಕಸ್ತೂರಿ
    ಸರಿಗಮ ಪದನಿಸ ಊದಿದನು
    ಸನಿದಪ ಮಗರಿಸ ಊದಿದನು

    ತನಗೆ ತುತ್ತೂರಿ ಇದೆಯೆಂದ
    ಬೇರಾರಿಗೂ ಅದು ಇಲ್ಲೆಂದ
    ತುತ್ತೂರಿ ಊದುತ ಕೊಳದ ಬಳಿ
    ಕಸ್ತೂರಿ ನಡೆದನು ಸಂಜೆಯಲಿ
    ಜಂಭದ ಕೋಳಿಯ ರೀತಿಯಲಿ

    ಜಾರಿತು ನೀರಿಗೆ ತುತ್ತೂರಿ
    ಗಂಟಲು ಕಟ್ಟಿತು ನೀರೂರಿ
    ಸರಿಗಮ ಊದಲು ನೋಡಿದನು
    ಗಗಗಗ ಸದ್ದನು ಮಾಡಿದನು
    ಬಣ್ಣವು ನೀರಿನ ಪಾಲಾಯ್ತು
    ಜಂಭದ ಕೋಳಿಗೆ ಗೋಳಾಯ್ತು


    :)
     

Share This Page